
Digital Leaf Hub
AI · Digital Marketing · Personal Branding
ನಿಮ್ಮ Mentor ಬಗ್ಗೆ ತಿಳಿಯಿರಿ
"ಒಬ್ಬ ಗ್ರಾಮೀಣ ವ್ಯಾಪಾರಿಯ ಕನಸು... ಈಗ ಸಾವಿರಾರು ಕನ್ನಡಿಗರ ಡಿಜಿಟಲ್ ಯಶಸ್ಸಿನ ಮಿಷನ್."
ನಮಸ್ಕಾರ! 🙏
ನಾನು ಕಲ್ಲಪ್ಪ ಗಾಣಿಗೇರ, Digital Leaf Hub ಸಂಸ್ಥಾಪಕ ಹಾಗೂ Kannada AI & Digital Marketing Coach.
ನನ್ನ ಜೀವನದ ಉದ್ದೇಶ ಒಂದೇ...
ಕರ್ನಾಟಕದ ಪ್ರತಿಯೊಬ್ಬ ಸಣ್ಣ ವ್ಯಾಪಾರಿಯೂ Generative AI ಮತ್ತು Digital Marketing ಶಕ್ತಿಯನ್ನು ಬಳಸಿಕೊಂಡು ತನ್ನ Business ಅನ್ನು Onlineಗೆ ತೆಗೆದುಕೊಂಡು, ತನ್ನ Brand ಕಟ್ಟಿಕೊಂಡು, ಹೆಚ್ಚಿನ ಗ್ರಾಹಕರನ್ನು ಪಡೆದು, ಉತ್ತಮ ಜೀವನ ನಿರ್ಮಿಸಬೇಕು.

ನನ್ನ ಪಯಣ
2007ರಿಂದ ನಾನು Computer ಹಾಗೂ Internet ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ.
2024ರಲ್ಲಿ ನಮ್ಮ ಊರು ಹೊಳೆಆಲೂರುದಲ್ಲಿ CSC Bharath Electronics ಆರಂಭಿಸಿದೆ. Electronics ಹಾಗೂ Home Appliances ಮಾರಾಟ ಮಾಡುವಾಗ ಒಂದು ದೊಡ್ಡ ಪ್ರಶ್ನೆ ನನ್ನ ಮುಂದೆ ನಿಂತಿತು.
"ಗ್ರಾಮದ Business ಅನ್ನು Onlineನಲ್ಲಿ ಹೇಗೆ ಬೆಳಸುವುದು?"
Website, Social Media, Google, Facebook Ads ಎಲ್ಲವೂ ಬೇಕಿತ್ತು. ಆದರೆ ಸರಿಯಾದ ಮಾರ್ಗದರ್ಶನ ಸಿಗಲಿಲ್ಲ. ಹಲವಾರು Third-Party Agencies ಜೊತೆ ಕೆಲಸ ಮಾಡಿದೆ. ಹೆಚ್ಚು ಹಣ ಖರ್ಚಾಯಿತು. ಆದರೆ ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲ.
"ಸ್ವಂತ Business ಬೆಳಸಬೇಕಾದರೆ Digital Marketing ಅನ್ನು ಸ್ವತಃ ಕಲಿಯಬೇಕು."
ಅಲ್ಲಿಂದಲೇ ನನ್ನ ಹೊಸ ಪ್ರಯಾಣ ಆರಂಭವಾಯಿತು.
ಕಲಿತದ್ದು... ಬದುಕನ್ನೇ ಬದಲಿಸಿತು
ನಾನು ಹಲವಾರು ವರ್ಷಗಳ ಕಾಲ Digital Marketing, Branding, Content Creation, Paid Ads, Sales Funnels, Automation ಹಾಗೂ ಈಗಿನ Generative AI ಕುರಿತು ಆಳವಾಗಿ ಕಲಿತೆ.
ಕಲಿತದ್ದನ್ನು ನನ್ನ ಸ್ವಂತ Businessನಲ್ಲಿ ಅಳವಡಿಸಿಕೊಂಡೆ. ಅದರ ಪರಿಣಾಮವಾಗಿ ನನ್ನ Business ಬೆಳೆಯಲು ಆರಂಭವಾಯಿತು.
ನನಗೆ ಸಿಕ್ಕ ಗೌರವ
ನನ್ನ ಕೆಲಸವನ್ನು CSC Digital India Ecosystem ಗುರುತಿಸಿತು. ಗ್ರಾಮೀಣ eStore ಉದ್ಯಮಿಯಾಗಿ ಗುರುತಿಸಿಕೊಂಡೆ.
2025ರಲ್ಲಿ ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಅದೇ ಕಾರ್ಯಕ್ರಮದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಶ್ರೀ ಕಪಿಲ್ ದೇವ್ ಜೀ ಅವರನ್ನು ಭೇಟಿ ಮಾಡಿದ ಕ್ಷಣ ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವಗಳಲ್ಲಿ ಒಂದಾಗಿದೆ.
ಒಬ್ಬ ರೈತನ ಮಗನಿಗೆ ಅದು ಕೇವಲ ಒಂದು ಕಾರ್ಯಕ್ರಮವಲ್ಲ...
"ದೊಡ್ಡ ಕನಸು ಕಾಣಲು ಧೈರ್ಯ ಕೊಟ್ಟ ಕ್ಷಣ."


Digital Leaf Hub ಯಾಕೆ?
ನನಗೆ ಒಂದು ಪ್ರಶ್ನೆ ಕಾಡುತ್ತಿತ್ತು.
"ನಾನು ಅನುಭವಿಸಿದ ಸಮಸ್ಯೆಗಳನ್ನು ಇನ್ನೂ ಸಾವಿರಾರು ಸಣ್ಣ ವ್ಯಾಪಾರಿಗಳು ಅನುಭವಿಸುತ್ತಿದ್ದಾರೆ."
ಅದಕ್ಕಾಗಿ ಹುಟ್ಟಿದ್ದು...
🌿 Digital Leaf Hub
ಇದು ಕೇವಲ Training Institute ಅಲ್ಲ. ಇದು ಕನ್ನಡದಲ್ಲಿ Digital Success Community.
ಇಲ್ಲಿ ನಾವು ಕಲಿಸುವುದು:
- Generative AI
- Digital Marketing
- Personal Branding
- Social Media Growth
- Content Creation
- Paid Advertising
- Business Automation
- Practical Business Systems
ಎಲ್ಲವೂ ಸರಳ ಕನ್ನಡದಲ್ಲಿ.
ನನ್ನ Mission
ಕರ್ನಾಟಕದ ಲಕ್ಷಾಂತರ ಸಣ್ಣ ವ್ಯಾಪಾರಿಗಳನ್ನು Digitalವಾಗಿ ಸಬಲಗೊಳಿಸುವುದು.
- ಅವರು ತಮ್ಮ Business ಅನ್ನು Onlineಗೆ ತೆಗೆದುಕೊಳ್ಳಬೇಕು,
- ತಮ್ಮ Brand ಕಟ್ಟಿಕೊಳ್ಳಬೇಕು,
- ಹೆಚ್ಚು ಗ್ರಾಹಕರನ್ನು ಪಡೆಯಬೇಕು,
- ಹೆಚ್ಚು ಲಾಭ ಗಳಿಸಬೇಕು,
- ಮತ್ತು ಉತ್ತಮ ಜೀವನವನ್ನು ನಿರ್ಮಿಸಬೇಕು.
ನನ್ನ Coaching Philosophy
ನಾನು Theory ಕಲಿಸುವ Coach ಅಲ್ಲ. ನಾನು Practical Implementation Coach. ನನ್ನ ಪ್ರತಿಯೊಂದು Sessionನಲ್ಲಿ...
- ✅ Action
- ✅ Implementation
- ✅ Real Business Examples
- ✅ AI Tools
- ✅ Step-by-Step Guidance
ನೀವು ಇಲ್ಲಿ ಏನು ಕಲಿಯಬಹುದು?
ನನ್ನ ನಂಬಿಕೆ
Technology ಬದಲಾಗಬಹುದು.
AI ಇನ್ನಷ್ಟು Powerful ಆಗಬಹುದು.
ಆದರೆ ಕಲಿಯುವವರು ಮಾತ್ರ ಮುಂದಿನ ದಿನಗಳಲ್ಲಿ ಗೆಲ್ಲುತ್ತಾರೆ.
ನನ್ನ ಆಹ್ವಾನ
ನೀವು ಕರ್ನಾಟಕದ...
- Small Business Owner
- Entrepreneur
- Freelancer
- Creator
- Student
- Homemaker
ಯಾರೇ ಆಗಿರಲಿ... Digital Marketing ಹಾಗೂ Generative AI ಅನ್ನು ಕನ್ನಡದಲ್ಲಿ ಕಲಿಯಲು ಬಯಸಿದರೆ...
Digital Leaf Hub ಕುಟುಂಬಕ್ಕೆ ನಿಮಗೆ ಹಾರ್ದಿಕ ಸ್ವಾಗತ.
ಒಟ್ಟಾಗಿ ಕಲಿಯೋಣ... ಒಟ್ಟಾಗಿ ಬೆಳೆಯೋಣ... ಒಟ್ಟಾಗಿ Digital Success ಸಾಧಿಸೋಣ.